ರಮ್ಯ, ಗೀತಾ, ಶಿವರಾಮು Â ಗೆಲುವು ಯಾರಿಗೆ!
- IndiaGlitz, [Tuesday,April 15 2014]
ಕನ್ನಡ ಸಿನೆಮಾ ರಂಗದಿಂದ ಮೂವರು ವ್ಯಕ್ತಿಗಳು 2014 ರ ಲೋಕ ಸಭಾ ಚುನಾವಣೆಗೆ ನಿಂತಿದ್ದಾರೆ. ಅವರೆಲ್ಲರೂ ಜನರ ಮುಂದೆ ಮತ ಯಾಚನೆ ಮಾಡುವುದಕ್ಕೆ ಇಂದು ಏಪ್ರಿಲ್ 14 ಕೊನೆಯ ದಿನ. ಏಪ್ರಿಲ್ 17 ರಂದೇ ಮತದಾನ. ಇದು ದಾನ ಅಲ್ಲ ಹಕ್ಕು Â ಯಾರನ್ನು ದೆಹಲಿಗೆ ಕಳಿಸುತ್ತಾರೆ ಎಂಬುದು ಒಂದು ಕಡೆ ಆದರೆ, ಮೇ 16 ರಂದು ಮಧ್ಯನ್ಹಾ ಹೊತ್ತಿಗೆ ಎಲ್ಲವೂ ಬೆಳಕಿಗೆ ಬರುವುದು.
ಮೂರು ಸಿನೆಮಾ ವ್ಯಕ್ತಿಗಳ ಪೈಕಿ ರಮ್ಯ ಅವರ ಗೆಲುವು ಸಾಧ್ಯ ಎಂದು ಸಮೀಕ್ಷೆಗಳು ಹೇಳುತ್ತಿದೆ. ಕಾಂಗ್ರೆಸ್ಸ್ ಐ ರಮ್ಯ ಸಹ ಕಳೆದ ಬಾರಿ ನಡೆದ ಬೈ ಎಲೆಕ್ಷನ್ ಅಲ್ಲಿ ಗೆದ್ದು ಆರು ತಿಂಗಳಲ್ಲೇ ಹಲವಾರು ಕ್ರಮಗಳನ್ನು ಜನರ ಹಿತಕ್ಕಾಗಿ ತೆಗೆದು ಕೊಂಡು ಲೋಕ ಸಭಾ ಆದಿವೇಶನದ ಕೊನೆಯ ದಿನ ಅವರ ಮೊದಲ ಭಾಷಣದಲ್ಲಿ ಎಲ್ಲರೂ ಮೆಚ್ಚುವ ಹಾಗೆ ಮಾತನಾಡಿದ್ದಾರೆ. ಆರು ತಿಂಗಳಲ್ಲಿ ರಮ್ಯ ಸಾದಿಸಿರುವುದು ಸಾಮಾನ್ಯವಾಗಿ ಒಬ್ಬ ಲೋಕ ಸಭಾ ಸದಸ್ಯ ತನ್ನ ಆವದಿಯಲ್ಲೆ ಅಷ್ಟು ಸುತ್ತಾಡುವುದಿಲ್ಲವೇನೋ. ಅದು ಅಲ್ಲದೆ ಈ ರಮ್ಯ ಅವರಿಗೆ ಬಿಗ್ ಬಾಸ್ ಅಭಯ ಹಸ್ತ ಬೇರೆ ಇದೆ. ಮಂಡ್ಯ ಜಿಲ್ಲೆಗೆ ಇವರಿಂದ ಒಳ್ಳೆಯ ಯೋಜನೆಗಳು ಬರುವುದು ಎಂದು ಅಪೇಕ್ಷೆ ಮಾಡಬಹುದು. 31ನೇವಯಸ್ಸಿಗೆ ರಾಜಕೀಯದಲ್ಲಿ ಉತ್ತುಂಗಕ್ಕೆ ಏರಿರುವ ರಮ್ಯ ಜನರ ಮೇಲೆ ಅಪಾರ ನಂಬಿಕೆ ಇಟ್ಟಿದ್ದಾರೆ.ಅವರಿಗೊಂದು ಭಾವನಾತ್ಮಕ ಸಂಬಂದವು ಬೆಳದಿದೆ.
ಗೀತಾ ಶಿವರಾಜಕುಮಾರ್ = ಶಿವಮೊಗ್ಗದ ಹೆಣ್ಣುಮಗಳು ಡಾಕ್ಟರ್ ರಾಜಕುಮಾರ್ ಕುಟುಂಬದ ಹಿರಿಯ ಸೊಸೆ ಅಪ್ಪನ ಆಸೆಗಳನ್ನು ಪೂರ್ತಿಗೊಳಿಸಲು ಹೆತ್ತ ತಾಯಿ ಆರೋಗ್ಯ ಚನ್ನಾಗಿಲ್ಲದ ಕಾರಣ ಕಣಕ್ಕೆ ಇಳಿದ್ದಾರೆ. ಇದಕ್ಕೆ ಸೆಂಚುರಿ ನಟ ಶಿವರಾಜಕುಮಾರ್ ಅವರ ಪೂರ್ಣ ಒಪ್ಪಿಗೆ ಇದೆ. ಇನ್ನು ಗೀತಾ ಶಿವರಾಜಕುಮಾರ್ ಹಾಗೂ ಶಿವರಾಜಕುಮಾರ್ ಚುನಾವಣೆ ಅಲ್ಲಿ ಗೆದ್ದರೆ ಅಲ್ಲಿಯೇ ನೆಲಸಿ ಜನ ಸೇವೆ ಮಾಡುವುದಾಗಿ ಹೇಳಿಕೆ ನೀಡಿದ್ದಾರೆ. ಆದರೆ ಅವರ ಎದುರಾಳಿ ಭಯಂಕರ ಜನಪ್ರಿಯ ವ್ಯಕ್ತಿ Â ಬಿ ಎಸ್ ಯೆಡಿಯೂರಪ್ಪ ಮಾಜಿ